Wednesday, August 5, 2020

create slideshow to blogger.

 ಬ್ಲಾಗರನಲ್ಲಿ ಒಂದು ಸ್ಲೈಡ್ ಶೋ ಇದ್ದರೆ ಬ್ಲಾಗ್ ಬಹಳ ಚನ್ನಾಗಿ ಕಾಣುತ್ತದೆ...
ಈ ಸ್ಲೈಡ್ ಶೋ ರಚಿಸುವುದು ಹೇಗೆಂದು ತಿಳಿಯೋಣ.
ಹಿಂದಿನ ವಿಡಿಯೋದಲ್ಲಿ ನಾನು ಈ ಸ್ಲೈಡ್ ಶೋ ಮಾಡಲು ಬೇಕಾದ ಚಿತ್ರಗಳನ್ನು ತಯಾರಿಸುವುದು ಹೇಗೆಂದು ತಿಳಿಸಿದ್ದೆ. 
ಅದರಂತೆ ನಿಮ್ಮ ಚಿತ್ರಗಳು ತಯಾರಾಗಿವೆ ಎಂದುಕೊಳ್ಳುವೆ. 
ನೀವು ತಯಾರಿಸಿದ ಚಿತ್ರಗಳನ್ನು ಪೇಂಟ್ ಮೂಲಕ ಚಿತ್ರಗಳ  ಸೈಜ್ 1200pix ಅಗಲ, 400pix ಎತ್ತರ ಇರುವಂತೆ ರಿಸೈಜ್ ಮಾಡಿಕೊಳ್ಳಿ. 

ಎಲ್ಲಾ ಚಿತ್ರಗಳು ಒಂದೇ ಸೈಜ್‌ ಇರಲಿ.

ಬ್ಲಾಗರ್ ಗೆ ಲಾಗಿನ್ ಆಗಿ ಹೊಸ ಪೋಸ್ಟ್ ಒಂದನ್ನು ತೆರೆದು ಅದರಲ್ಲಿ ನೀವು ತಯಾರಿಸಿದ ಎಲ್ಲಾ ಇಮೇಜ್ ಗಳನ್ನು ಸೇರಿಸಿ.
ಚಿತ್ರಗಳನ್ನು ಸೆಲೆಕ್ಟ್ ಮಾಡಿ pen icon ಮೇಲೆ ಒತ್ತಿ   ಓರಿಜಿನಲ್ ಸೈಜ್ ಎಂದು ಕೊಡಿ (ಎಲ್ಲಾ ಚಿತ್ರಗಳಿಗೆ)
ನಂತರ ಪೋಸ್ಟ್ ನ್ನು ಸೇವ್ ಮಾಡಿ. (ಪಬ್ಲಿಷ್ ಮಾಡಬೇಡಿ)
Page layout ಗೆ ಹೋಗಿ, cross column ನಲ್ಲಿ add a gadget ಕೊಡಿ.
HTML / JavaScript ಗ್ಯಾಜೆಟ್ ಸೆಲೆಕ್ಟ್ ಮಾಡಿ.

ಅದರಲ್ಲಿ ನೀಡಿರುವ ಫೈಲ್ ನಿಂದ HTML code ಕಾಪಿ ಮಾಡಿ ಪೇಸ್ಟ್ ಮಾಡಿ.
Slider container ಕೆಳಗೆ.
Image 1 ಇರುವಲ್ಲಿ ಚಿತ್ರಕ್ಕೆ ಒಂದು ಹೆಸರು ನೀಡಿ, ಅಲ್ಲಿರುವ ಇಮೇಜ್ URL ಜಾಗದಲ್ಲಿ ಪೋಸ್ಟ್ ಗೆ ಹೋಗಿ‌ ನೀವು ಸೇರಿಸಬೇಕಾದ ಇಮೇಜ್ ಮೇಲೆ right click ಮಾಡಿ  copy Image address ಮಾಡಿ <img src="ಇಲ್ಲಿ ಪೇಸ್ಟ್ ಮಾಡಿ
ಇದೇ ಹಂತವನ್ನು ಎಲ್ಲಾ ಪೋಟೋ ಗಳಿಗೆ ಅನುಸರಿಸಿ.
ಇಲ್ಲಿ‌10 ಪೋಟೋಗಳನ್ನು ಸೇರಿಸಲು ಅವಕಾಶವಿದ್ದು, ಹೆಚ್ಚು ಪೋಟೋ ಸೇರಿಸಲು ಚಿತ್ರದಲ್ಲಿ ಕಾಣುವಂತ ಕೋಡನ್ನು ಕಾಪಿ ಮಾಡಿ ಪೇಸ್ಟ್ ಮಾಡಿಕೊಂಡು  ಹಿಂದಿನ ಹಂತಗಳನ್ನೇ ಅನುಸರಿಸಿ.
ಚಿತ್ರಗಳನ್ನು ಕಡಿಮೆ ಮಾಡಿಕೊಳ್ಳಬೇಕಾಗಿದ್ದಲ್ಲಿ ಚಿತ್ರದಲ್ಲಿ ಕಾಣುವಂತೆ ಬೇಡವಾದ ಕೋಡಗಳನ್ನು delete ಮಾಡಿ.
ಚಿತ್ರಗಳ URLಹಾಗೂ ಅದರ ಕೆಳಗೆ ನೀಡಿರುವ <span class="dot"></span>  ಕೋಡ್ ಗಳು ಸಮನಾಗಿರಬೇಕು....
ಎಲ್ಲಾ ಮುಗಿದ ಮೇಲೆ Save ಮಾಡಿ.


No comments:

Create your own Blog. ಬ್ಲಾಗ್‌ ತಯಾರಿಸುವುದು ಹೇಗೆ?

ನೀವೂ ಕೂಡಾ ಈಗ ಬ್ಲಾಗ್‌ ತಯಾರಿಸಿ.  ಹೇಗೆ? ಅಂತೀರಾ..... ಮುಂದೆ ಓದಿ. ನಿಮ್ಮ ವಯಕ್ತಿಕ ಅಥವಾ ಶಾಲೆಯ ಬ್ಲಾಗ್‌ ತಯಾರಿಸುವ ಆಸಕಿ ಇದ್ದಲ್ಲಿ, ಈ ಪೋಸ್ಟ್‌ ನಿಮಗೆ ಸಹಾಯವಾಗ...